
6th September 2025
ಕುಷ್ಟಗಿ ನಗರದಲ್ಲಿ ಹಜರತ್ ಹೈದರ್ ಅಲಿ ಕಮೀಟಿ ತೆಗ್ಗಿನಓಣಿ ಹಾಗೂ ಸಂಜೀವಿನಿ ರಕ್ತ ನಿಧಿ ಕೇಂದ್ರ ಇವರ ಸಹಯೋಗದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ ರವರ ಜನ್ಮ ದಿನದ ಪ್ರಯುಕ್ತ 5ನೇ ವರ್ಷದ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಕುಷ್ಟಗಿಯ ಮದ್ದಾನಿ ಹಿರೇಮಠದ ಶ್ರೀ ಕರಿಬಸವ ಶಿವಾಚಾರ್ಯರು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಡಾ ಅಧ್ಯಕ್ಷರಾದ ಹಸನ್ ಸಾಬ್ ದೋಟಿಹಾಳ್ ವಹಿಸಿದ್ದರು.
ಉದ್ಘಾಟನೆಯನ್ನು ಕುಷ್ಟಗಿ ಕ್ಷೇತ್ರದ ಶಾಸಕರಾದ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ದೊಡ್ಡನಗೌಡ ಹೆಚ್. ಪಾಟೀಲ್ ಅವರು ಸಸಿಗೆ ನೀರು ಹಾಕುವುದರ ಮೂಲಕ ನೆರವೇರಿಸಿದರು. ಹಮ್ಮದ್ ಹುಸೇನ್ ಆಫೀಸಾಬ್ ಪ್ರಾರ್ಥನೆ ಮಾಡಿದರು. ಆರ್.ಟಿ ಸುಬಾನಿ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು. ನಿರೂಪಣೆ ಹಾಗೂ ಸ್ವಾಗತವನ್ನು ಬಸವರಾಜ್ ಗಾಣಗೇರ್ ಮಾಡಿದರು.
ಪೈಗಂಬರ್ ಅವರ ಜೀವನ ಸಾಧನೆ ಕುರಿತು ಡಾಕ್ಟರ್ ಜೀವನಸಾಬ್ ಬಿನ್ನಾಳ್ ಮಾತನಾಡಿದರು.
ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್, ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ಹಾಗೂ ಶ್ರೀಕರಿಬಸವ ಶಿವಾಚಾರ್ಯರು ಕಾರ್ಯಕ್ರಮ ಕುರಿತು ಮಾತನಾಡಿದರು.
ತೆಗ್ಗಿನಓಣಿಯಲ್ಲಿರುವ - ಶವ ಸಂಸ್ಕಾರ ಕಾರ್ಯಕ್ಕಾಗಿ ಸೇವೆ ಸಲ್ಲಿಸುತ್ತಿರುವ ಕಳೆದ 30 ವರ್ಷದಿಂದ ಯಾವುದೇ ಪಲಾಪೇಕ್ಷೆ ಹಾಗೂ ಹಣ ಪಡೆಯದೆ ಸೇವೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ, 10 ಜನ ಸಾಧಕರಿಗೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಮಹಾಂತೇಶ್ ಕಲಭಾವಿ, ಪುರಸಭೆ ಸದಸ್ಯರಾದ ಮೈನುದ್ದೀನ್ ಮುಲ್ಲಾ, ಜಿಕೆ ಹಿರೇಮಠ್, ಮಹಿಬೂಬ್ ಕಮ್ಮಾರ್, ಉಮೇಶ್ ಮಂಗಳೂರು, ಖಾಜಾಸಾಬ್ ಅತ್ತಾರ್, ಅಯೂಬ್ ಮುಲ್ಲಾ, ಅಹಮ್ಮದ್ ಹುಸೇನ್ ಆಧೋನಿ, ನಜೀರ್ ಸಾಬ್ ಮೂಲಿಮನಿ, ಕೊಪ್ಪಳ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಅಧ್ಯಕ್ಷರಾದ ಸೈಯದ್ ಅಮೀನುದ್ದಿನ್ ಮುಲ್ಲಾ ಹಾಗೂ ಹಾಗೂ ಊರಿನ ಗುರುಹಿರಿಯರು ಉಪಸ್ಥಿತರಿದ್ದರು.
ಒಟ್ಟು 222 ಜನ ರಕ್ತದಾನ ಮಾಡುವ ಮುಖಾಂತರ ಕೊಪ್ಪಳ ಜಿಲ್ಲೆಯಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದ, ಹೈದರ್ ಅಲಿ ಕಮಿಟಿ ಕುಷ್ಟಗಿ ಹಾಗೂ ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಹಜರತ್ ಹೈದರ್ ಅಲಿ ಕಮಿಟಿಯವರ ಕಡೆಯಿಂದ ಬಹು ದೊಡ್ಡದಾದ ಧನ್ಯವಾದಗಳನ್ನು ಆರ್.ಟಿ. ಸುಬಾನಿ ತಿಳಿಸಿದ್ದಾರೆ.
ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.
ಒಟ್ಟು 222 ಜನ ರಕ್ತದಾನ ಮಾಡುವ ಮುಖಾಂತರ ಕೊಪ್ಪಳ ಜಿಲ್ಲೆಯಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದ, ಹೈದರ್ ಅಲಿ ಕಮಿಟಿ ಕುಷ್ಟಗಿ ಹಾಗೂ ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಹಜರತ್ ಹೈದರ್ ಅಲಿ ಕಮಿಟಿಯವರ ಕಡೆಯಿಂದ ಬಹು ದೊಡ್ಡದಾದ ಧನ್ಯವಾದಗಳನ್ನು ಆರ್.ಟಿ. ಸುಬಾನಿ ತಿಳಿಸಿದ್ದಾರೆ.
ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಕುಷ್ಟಗಿ ಇದರ ವಾರ್ಷಿಕ ಸಭೆ
ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣ: ಹೆಸರು ಬಹಿರಂಗ- ಉಮೇಶ ಸಿಂಗನಾಳ ಮತ್ತು ಮಹ್ಮದ್ ಜುಬೇರ್ ವಿರುದ್ಧ ದೂರು ದಾಖಲು